ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಜನವರಿ 28 ರಂದು ನಗರದಲ್ಲಿ ಟ್ವಿಂಟಿ-ಟ್ವೆಂಟಿ ಕ್ರಿಕೆಟ್ ಪಂದ್ಯಾವಳಿ

ಭಟ್ಕಳ: ಜನವರಿ 28 ರಂದು ನಗರದಲ್ಲಿ ಟ್ವಿಂಟಿ-ಟ್ವೆಂಟಿ ಕ್ರಿಕೆಟ್ ಪಂದ್ಯಾವಳಿ

Tue, 26 Jan 2010 02:52:00  Office Staff   S.O. News Service
ಭಟ್ಕಳ, ಜನವರಿ 25: ಭಟ್ಕಳದ ಸುಲ್ತಾನ್ ಯುತ್ ವೆಲ್ಫೆರ್ ಅಸೋಸಿಯೇಶನ್ ಜ.೨೮ರಂದು ಉತ್ತರಕನ್ನಡ ಜಿಲ್ಲಾ ಮಟ್ಟದ ಆಹ್ವಾನಿತ ೨೦:ಟ್ವೆಂಟಿ ಐಪಿ‌ಎಲ್ ಮಾದರಿಯ ಕ್ರಿಕೇಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಹಾಗೂ ಪುರಸಭಯ ಅಧ್ಯಕ್ಷರೂ ಆದ ಪರ್ವೇಝ್ ಕಾಸಿಮ್‌ಜಿ ತಿಳಿಸಿದರು. ಅವರು ಇಲ್ಲಿನ ಹೋಟೆಲ್ ಶ್ರೀನಿವಾಸದಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಈ ವಿಷಯವನ್ನು ತಿಳಿಸಿ ಮಾತನಾಡುತ್ತಿದ್ದರು. 
 
ನಗರದ ಯಂಗ್ ಮುಸ್ಲಿಮ್ ಸರ್ವಿಸ್ ಅಸೋಸಿಯೇಶನ್ ಮೈದಾನದಲ್ಲಿ ಈ ಪಂದ್ಯಾವಳಿಯನ್ನು ನಡೆಸಲಾಗುತ್ತಿದ್ದು ಇದರಲ್ಲಿ ಆಹ್ವಾನಿತ ಕಾರವಾರ, ಕುಮಟಾ, ಕೈಗಾ, ಮಂಕಿ, ಹೊನ್ನಾವರ, ಮುರುಡೇಶ್ವರ ಹಾಗೂ ಭಟ್ಕಳದ ೫ತಂಡಗಳು ಭಾಗವಹಿಸುವವು ಎಂದು ತಿಳಿಸಿದರು. ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವಾಗಿ ೨೦,೨೦೨ ನಗದು ಹಾಗೂ ಟ್ರೋಫಿ, ದ್ವಿತಿಯಾ ೧೨,೩೪೫ ನಗದು ಹಾಗೂ ಟ್ರೋಫಿ, ಅಲ್ಲದೆ ಇತರ ವೈಯಕ್ತಕ ಹಾಗೂ ಸಮಧಾನಕರ ಬಹುಮಾನಗಳನ್ನು ನೀಡಲಾಗುವುದು ಎಂದು ಅವರು  ಆ.೨೮ರಿಂದ ಆರಂಭವಾದ ಪಂದ್ಯಾವಳಿಯಲ್ಲಿ ಅಚಿತಿಮಾ ಪಂದ್ಯವು ಫೆ.೭ರಂದು ನಡೆವುಯುವುದು ಎಂದರು. 
 
ಈ ಸಂದರ್ಭದಲ್ಲಿ ಸಂಘದ ಪ್ರ.ಕಾ. ಮುಹಮ್ಮದ್ ಇಸ್ಮಾಯಲ್ ಹಲ್ಲಾರೆ, ಕ್ರೀಡಾ ಕಾರ್ಯದರ್ಶಿ ಅಬ್ದುಲ್ ಸಮಿ ಮೆಡಿಕಲ್, ಎಮ.ಎಮ ಅಝೀಮ್, ಅಶ್ಫಾಖ್, ಶಾಝೀರ್ ನದ್ವಿ ಮುಂತಾದವರು ಉಪಸ್ಥಿತರಿದ್ದರು.


Share: